ಕರ್ನಾಟಕ ರಾಜ್ಯ ಸರ್ಕಾರವು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆಯಾಗಿದ್ದು, ರಾಜ್ಯಪಾಲರು ಸಾಂವಿಧಾನಿಕ ಮುಖ್ಯಸ್ಥರಾಗಿರುತ್ತಾರೆ. ಐದು ವರ್ಷಗಳ ಕಾಲ ನೇಮಕಗೊಳ್ಳುವ ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಿಸುತ್ತಾರೆ ಮತ್ತು ಮುಖ್ಯಮಂತ್ರಿಯವರ ಸಲಹೆಯ ಮೇರೆಗೆ ಅವರ ಮಂತ್ರಿ ಮಂಡಳಿಯನ್ನು ನೇಮಿಸುತ್ತಾರೆ. ರಾಜ್ಯಪಾಲರು ರಾಜ್ಯದ ವಿಧ್ಯುಕ್ತ ಮುಖ್ಯಸ್ಥರಾಗಿ ಉಳಿದಿದ್ದರೂ ಸಹ, ಸರ್ಕಾರದ ದಿನನಿತ್ಯದ ಓಟವನ್ನು ಮುಖ್ಯಮಂತ್ರಿ ಮತ್ತು ಅವರ ಮಂತ್ರಿ ಮಂಡಳಿಯು ನೋಡಿಕೊಳ್ಳುತ್ತದೆ, ಇದರಲ್ಲಿ ಹೆಚ್ಚಿನ ಪ್ರಮಾಣದ ಶಾಸಕಾಂಗ ಅಧಿಕಾರಗಳನ್ನು ನೀಡಲಾಗುತ್ತದೆ. == ರಾಜ್ಯಾಡಳಿತ == ಕರ್ನಾಟಕ ಸರ್ಕಾರವು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ, ರಾಜ್ಯಪಾಲರು ಸಂವಿಧಾನಾತ್ಮಕ ನಾಯಕರಾಗಿರುವ ಒಂದು ಸಂಸ್ಥೆ. ಐದು ವರ್ಷದ ಅವಧಿಗೆ ನೇಮಿತರಾದ ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಅವರ ಮಂತ್ರಿಮಂಡಲವನ್ನು ನೇಮಿಸುತ್ತಾರೆ. ರಾಜ್ಯಪಾಲರು ರಾಜ್ಯದ ಸಾಂಪ್ರದಾಯಿಕ ನಾಯಕರಾಗಿರುತ್ತಾರಾದರೂ, ಸರ್ಕಾರದ ದೈನಂದಿನ ನಿರ್ವಹಣೆಯು ಗಮನಾರ್ಹವಾದ ಶಾಸನಾಧಿಕಾರಗಳನ್ನು ವಹಿಸಲಾದ ಮುಖ್ಯಮಂತ್ರಿ ಮತ್ತು ಅವರ ಮಂತ್ರಿಮಂಡಲದ ಉಸ್ತುವಾರಿಯಲ್ಲಿರುತ್ತದೆ. == ಇತಿಹಾಸ == ಕರ್ನಾಟಕದ ಏಕೀಕರಣ ಭಾರತವು ಸ್ವತಂತ್ರವಾದ ಮತ್ತು ದೇಶ ವಿಭಜನೆಯಾದ ಬಳಿಕ ಭಾಷಾವಾರು ಮತ್ತು ಇತರ ಮಾನದಂಡಗಳನ್ನು ಆಧರಿಸಿ ರಾಜ್ಯಗಳನ್ನು ರಚಿಸಲು ಪುನರ್ವಿಂಗಡಣೆಯ ಗಡಿಗಳನ್ನು ಗುರುತಿಸಲಾಯಿತು ಸ್ವಾತಂತ್ರ್ಯದ ನಂತರ, ಒಡೆಯರ್ ಅವರು ಜನರ ಚಳುವಳಿಯನ್ನು ಗಮನಿಸಿ ಅವರ ಅಪೇಕ್ಷೆ ಮನ್ನಿಸಿ ಭಾರತದ ಭಾಗವಾಗಲು ಸಮ್ಮತಿಸಿದರು. 1950 ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು, ಮಹಾರಾಜರು 1975 ರ ವರೆಗೆ ಅದರ ರಾಜ ಪ್ರಮುಖ, ಅಥವಾ ರಾಜ್ಯಪಾಲರಾದರು. ಏಕೀಕರಣ ಚಳುವಳಿ 19ನೆಯ ಶತಮಾನದ ಎರಡನೇ ಭಾಗದಲ್ಲಿ ಆರಂಭವಾಗಿ, 1956 ರಲ್ಲಿ ರಾಜ್ಯ ಪುನಸ್ಸಂಘಟನೆ ಕಾಯಿದೆಯೊಂದಿಗೆ ಚಳುವಳಿ ಮುಕ್ತಾಯವಾಯಿತು. ಇದರಿಂದ ಕೂರ್ಗ್ / ಕೊಡಗು, ಮದ್ರಾಸ್`ಪ್ರಾಂತ್ಯ , ಹೈದರಾಬಾದ್, ಹಾಗೂ ಮುಂಬಯಿ ರಾಜ್ಯದ ಕನ್ನಡ ಭಾಷೆಯ ಜನರು ಹೆಚ್ಚು ಇರುವ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು. ಮುಖ್ಯಮಂತ್ರಿಯಾದ ಡಿ.ದೇವರಾಜ ಅರಸು ಅವರ ಕಾಲದಲ್ಲಿ ೧ ನವೆಂಬರ್, ೧೯೭೩ ರಂದು, ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಹೊಸ ಮೈಸೂರು ರಾಜ್ಯವು(ನಂತರ ವಿಶಾಲ ಮೈಸೂರು-ನಂತರ ಕರ್ನಾಟಕ) ೧ ನವೆಂಬರ್.೧೯೫೬ ರಲ್ಲಿ ರಚನೆಯಾಯಿತು ಅಂದಿನಿಂದ ೧ ನವೆಂಬರ್ ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಕನ್ನಡ ಭಾಷೆಯ ಕೆಲವು ಪ್ರದೇಶಗಳು ಸೇರ್ಪಡೆ ಆಗದ ಕಾರಣ ಕನ್ನಡಿಗರು ನಿರಾಶೆ ಹೊಂದಿದ್ದರೂ, ಸಂಸತ್ತಿನಲ್ಲಿ ಎಸ್ಆರ್ಸಿ ()ರಾಜ್ಯ ಪುನರ್ವಿಂಗಡಣಾ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಲು ಒಪ್ಪಿದರು. ರಾಜರ ಆಡಳಿತದಲ್ಲಿದ್ದ ಮೈಸೂರು ರಾಜ್ಯವು ಸಕಾರಾತ್ಮಕವಾಗಿ, ಪ್ರತಿಕ್ರಿಯಿಸಿತು .ಕರ್ನಾಟಕಕ್ಕೆ ಸೇರದೆ ಕೈಬಿಟ್ಟ ಹೆಚ್ಚು ಕನ್ನಡಿಗರಿರುವ ಪ್ರದೇಶಗಳ ಪೈಕಿ ಅತ್ಯಂತ ಗಮನಾರ್ಹವಾದ ಪ್ರದೇಶ ಕಾಸರಗೋಡು. ಇದು ಏಕೀಕರಣ ಚಳವಳಿಯನ್ನು ಪ್ರಾರಂಭಿಸಿದ ಕೇಂದ್ರಗಳಲ್ಲಿ ಒಂದಾಗಿದೆ. ಹೀಗಾಗಿ ಕನ್ನಡ ಮಾತನಾಡುವ ಜನಸಂಖ್ಯೆಯುಳ್ಳ ಪ್ರದೇಶಗಳಲ್ಲಿ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಅವರು ತಳಮಳ ಗೊಂಡಿದ್ದಾರೆ; ಹೋರಾಟ ಮುಂದುವರಿದಿದೆ. ಕರ್ನಾಟಕ ರಾಜ್ಯವು ತನ್ನ ರಾಜಧಾನಿಯಾಗಿ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿತು, ಮತ್ತು ಕನ್ನಡಕ್ಕೆ ಆಡಳಿತ ಭಾಷೆಯ ಸ್ಥಾನಮಾನವನ್ನು ನೀಡಿತು. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮೇಲ್ವಚಾರಣೆಯಲ್ಲಿ ವಿಧಾನಸೌಧದ ನಿರ್ಮಾಣವಾಗಿ, ಅದು ರಾಜ್ಯದ ಶಾಸನಸಭೆಯ (ಸಂಸತ್`ಭವನ) ಸದನವಾಯಿತು. ಹಿಂದಿನ ಸಚಿವಾಲಯವಾಗಿದ್ದ ‘ಅಠಾರಾ ಕಛೇರಿ'ಯನ್ನು (ಸರ್ಕಾರದ ಆಡಳಿತ ಕಛೇರಿ) ರಾಜ್ಯದ ಹೈಕೋರ್ಟ್ ಮಾಡಲಾಯಿತು. ಸ್ವಾತಂತ್ರಾನಂತರದ ಇತಿಹಾಸ ಕಾಂಗ್ರೆಸ್ ಪಕ್ಷದ ಕೆ.ಚಂಗಲರಾಯ ರೆಡ್ಡಿ (ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ)25ನೇ ಅಕ್ಟೋಬರ್ 1947 ರಂದುಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. ಮೈಸೂರು ಮಹಾರಾಜ ಎಚ್.ಎಚ್.ಶ್ರೀ ಜಯಚಾಮರಾಜೇಂದ್ರ ಒಡೆಯರ್ ರಾಜಪ್ರಮುಖರಾದರು. ನಂತರ ರಾಜ್ಯದ ರಾಜ್ಯಪಾಲರಾದರು. ರೆಡ್ಡಿಯವರ ನಂತರ ದಿ 30ನೇ ಮಾರ್ಚ್ 1952 ರಿಂದ ಕಾಂಗ್ರೆಸ್ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾದರು. == ಮುಖ್ಯಮಂತ್ರಿ == ಕರ್ನಾಟಕದ ಮುಖ್ಯಮಂತ್ರಿ ಭಾರತದ ಕರ್ನಾಟಕದ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ. ಭಾರತದ ಸಂವಿಧಾನದ ಪ್ರಕಾರ, ರಾಜ್ಯಪಾಲರು ರಾಜ್ಯದ ನ್ಯಾಯಾಂಗ ಮುಖ್ಯಸ್ಥರಾಗಿದ್ದಾರೆ, ಆದರೆ ವಾಸ್ತವಿಕ ಕಾರ್ಯನಿರ್ವಾಹಕ ಪ್ರಾಧಿಕಾರವು ಮುಖ್ಯಮಂತ್ರಿಯವರ ಮೇಲೆ ನಿಂತಿದೆ. ಕರ್ನಾಟಕ ವಿಧಾನಸಭೆಗೆ ಚುನಾವಣೆಯ ನಂತರ, ರಾಜ್ಯದ ರಾಜ್ಯಪಾಲರು ಸಾಮಾನ್ಯವಾಗಿ ಪಕ್ಷವನ್ನು (ಅಥವಾ ಒಕ್ಕೂಟವನ್ನು) ಬಹುಮತದ ಸ್ಥಾನಗಳೊಂದಿಗೆ ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ. ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಿಸುತ್ತಾರೆ, ಅವರ ಮಂತ್ರಿಗಳ ಸಭೆ ಒಟ್ಟಾಗಿ ವಿಧಾನಸಭೆಗೆ ಜವಾಬ್ದಾರವಾಗಿರುತ್ತದೆ. ಅವರಿಗೆ ವಿಧಾನಸಭೆಯ ವಿಶ್ವಾಸವಿದೆ ಎಂಬ ಕಾರಣಕ್ಕೆ, ಮುಖ್ಯಮಂತ್ರಿಯವರ ಅವಧಿ ಐದು ವರ್ಷಗಳಾಗಿದ್ದು, ಯಾವುದೇ ಅವಧಿಯ ಮಿತಿಗೆ ಒಳಪಡುವುದಿಲ್ಲ. == ಆಡಳಿತ ವಿಭಾಗಗಳು == ಕರ್ನಾಟಕ ರಾಜ್ಯವನ್ನು ಆಡಳಿತಾತ್ಮಕ ಉದ್ದೇಶಗಳಿಗಾಗಿ ನಾಲ್ಕು ಆದಾಯ ವಿಭಾಗಗಳು, 49 ಉಪವಿಭಾಗಗಳು, 31 ಜಿಲ್ಲೆಗಳು, 177 ತಾಲ್ಲೂಕುಗಳು ಮತ್ತು 747 ಹೋಬಳಿ / ಆದಾಯ ವಲಯಗಳು ಮತ್ತು 5628 ಗ್ರಾಮ ಪಂಚಾಯತ್ ಗಳಾಗಿ ವಿಭಜಿಸಲಾಗಿದೆ.[1] ರಾಜ್ಯವು 281 ಪಟ್ಟಣಗಳು ಮತ್ತು 7 ಪುರಸಭಾ ಸಂಸ್ಥೆಗಳನ್ನು ಹೊಂದಿದೆ. ಭಾರತದ 23 ನಗರಪ್ರದೇಶಗಳಲ್ಲಿ ಮತ್ತು ನಗರಗಳಲ್ಲಿ, ಬೆಂಗಳೂರು ಐದನೇ ದೊಡ್ಡ ಮಹಾನಗರವಾಗಿದೆ. ಇದು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಒಂದಾಗಿದೆ. . ನಗರೀಕರಣದಿಂದ ಜನ ಸಾಂದ್ರತೆಯು ಹೆಚ್ಚುತ್ತಿದೆ. ೮ ಮಹಾನಗರಪಾಲಿಕೆಗಳು ಇರುವುದು ಹೆಚ್ಚುಗಾರಿಕೆ ಬೆಂಗಳೂರು ೧೯೮ ವಾರ್ಡ್ ಮೈಸೂರು ಬೆಳಗಾವಿ ಹುಬ್ಬಳ್ಳಿ-ಧಾರವಾಢ ಮಂಗಳೂರು ದಾವಣಗೆರೆ ಬಳ್ಳಾರಿ ಗುಲ್ಬರ್ಗಾ == ರಾಜಕೀಯ ಮತ್ತು ಆಡಳಿತಾತ್ಮಕ ಪುನಸ್ಸಂಘಟನೆ == ಮುಖ್ಯ ಲೇಖನ: ಕರ್ನಾಟಕದ ಏಕೀಕರಣ ಮೈಸೂರು ಮತ್ತು ಕೊಡಗು ರಾಜ್ಯಗಳು, ಮುಂಬಯಿ ಮತ್ತು ಹೈದರಾಬಾದ್,ನ ಮತ್ತು ಮದ್ರಾಸ್ ನ ಹಳೆಯ ರಾಜ್ಯಗಳ ಕನ್ನಡ ಮಾತನಾಡುವ ಜಿಲ್ಲೆಗಳು ಕರ್ನಾಟಕದಲ್ಲಿ ವಿಲೀನಗೊಂಡಿತು. *ನಂತರ, 1956 ರಲ್ಲಿ ತನ್ನ ಪ್ರಸಕ್ತ ರೂಪವನ್ನು ತೆಗೆದುಕೊಂಡಿತು. ಮೈಸೂರು ರಾಜ್ಯವು 10 ಜಿಲ್ಲೆಗಳನ್ನು ಹೊಂದಿತ್ತು ಅವು : ಬೆಂಗಳೂರು, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. ಬಳ್ಳಾರಿಯು 1953 ರಲ್ಲಿ ಈಗಿನ ಕರ್ನಾಟಕಕ್ಕೆ ಸೇರಿತು. (ಇವು ಎಲ್ಲಾ ಕರ್ನಾಟಕದಲ್ಲಿ ಸೇರಿದವು.) ಹೊಸ ಆಂಧ್ರ ರಾಜ್ಯವು ಮದ್ರಾಸ್` ನ ಉತ್ತರ ಜಿಲ್ಲೆಗಳಲ್ಲಿ ಸೃಷ್ಟಿಯಾಯಿತು. ಆಗ ಮೈಸೂರು ರಾಜ್ಯಕ್ಕೆ ಮದ್ರಾಸ್ ಪ್ರಾಂತ್ಯದಿಂದ ವರ್ಗಾಯಿಸಿದ. ಕೊಡಗು ಜಿಲ್ಲಾ(ಕೇಂದ್ರಾಡಳಿತ), ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಮದ್ರಾಸ್ ರಾಜ್ಯದ ಉತ್ತರ ಕನ್ನಡ ಧಾರವಾಡ, ಬೆಳಗಾವಿ ಜಿಲ್ಲೆ, ಮತ್ತು ಮುಂಬಯಿ ಪ್ರಾಂತ್ಯದ ಬಿಜಾಪುರ ಜಿಲ್ಲೆ; ಮತ್ತು ಹೈದರಾಬಾದ್ ಪ್ರಾಂತ್ಯದಿಂದ ಬೀದರ್ ಜಿಲ್ಲೆ, ಗುಲ್ಬರ್ಗಾ ಜಿಲ್ಲೆ, ಮತ್ತು ರಾಯಚೂರು ಜಿಲ್ಲೆಗಳನ್ನು ಕರ್ನಾಟಕಕ್ಕೆ ವರ್ಗಾಯಿಸಲಾಯಿತು . 1989 ರಲ್ಲಿ ಗ್ರಾಮಾಂತರ ಪ್ರದೇಶ ಬೆಂಗಳೂರಿನಿಂದ ಬೇರ್ಪಟ್ಟು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಯಿತು. 1997 ರಲ್ಲಿ ಬಾಗಲಕೋಟೆ ಜಿಲ್ಲೆಯ ವಿಜಯಪುರ/ಬಿಜಾಪುರದಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಯಿತು. ಮೈಸೂರು ಜಿಲ್ಲೆ ಒಡೆದು ಚಾಮರಾಜನಗರ ಜಿಲ್ಲೆ ಆಯಿತು. ಧಾರವಾಡ ಜಿಲ್ಲೆ ಒಡೆದು ಗದಗ ಜಿಲ್ಲೆ ಹುಟ್ಟಿತು. ಮತ್ತೆ ಧಾರವಾಡ ಜಿಲ್ಲೆ ಒಡೆದು ಹಾವೇರಿ ಜಿಲ್ಲೆ ಆಯಿತು. ರಾಯಚೂರು ಜಿಲ್ಲೆ ಒಡೆದು ಕೊಪ್ಪಳ ಜಿಲ್ಲೆ ಆಯಿತು. ದಕ್ಷಿಣ ಕನ್ನಡ ಬೇರ್ಪಟ್ಟು ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಆಯಿತು. ದಾವಣಗೆರೆ ಜಿಲ್ಲೆಯನ್ನು ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಶಿವಮೊಗ್ಗ ಜಿಲ್ಲೆಗಳ ಭಾಗಗಳಿಂದ ರಚಿಸಲಾಗಿದೆ. 2008 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಇಬ್ಭಾಗಿಸಿ ರಾಮನಗರ ಎಂಬ ಹೊಸ ಜಿಲ್ಲೆಯ ರಚನೆಯಾಯಿತು. ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು, ಹಿಂದಿನ ಕೋಲಾರ ಜಿಲ್ಲೆಯನ್ನು ಒಡೆದು ಮಾಡಲಾಯಿತು.ಹಾಗೆಯೇ ಬಳ್ಳಾರಿ ಜಿಲ್ಲೆಯನ್ನು ಒಡೆದು ವಿಜಯನಗರ ಜಿಲ್ಲೆಯನ್ನು ರಚಿಸಲಾಗಿದೆ.ಇದು ಇಂದಿನ (೨೦೨೧) ಕರ್ನಾಟಕ. ಈಗ ಕರ್ನಾಟಕದಲ್ಲಿ(೨೦೨೧) ೩೧ ಜಿಲ್ಲೆಗಳಿವೆ.(ಕರ್ನಾಟಕದ ಜಿಲ್ಲೆಗಳು). == ಹೆಚ್ಚಿನ ಮಾಹಿತಿ == ಕರ್ನಾಟಕ ವಿಧಾನಸಭೆ ಚುನಾವಣೆ, 2013 ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮--2018 ಕರ್ನಾಟಕದ ಇತಿಹಾಸ ಕರ್ನಾಟಕದ ಮುಖ್ಯಮಂತ್ರಿಗಳು ಕರ್ನಾಟಕದ ಏಕೀಕರಣ ಕರ್ನಾಟಕ ಸರ್ಕಾರದ ಮಂತ್ರಿಮಂಡಲ, ೨೦೧೩ ಕರ್ನಾಟಕ ಸರ್ಕಾರದ ಮಂತ್ರಿಮಂಡಲ, ೨೦೧೮ ಕರ್ನಾಟಕ ರಾಜ್ಯ ಸರಕಾರಿ ಒಡೆತನದ ನಿಗಮ ಮಂಡಳಿಗಳು ಮತ್ತು ನೇಮಕ ೧ ಸಕ್ಕರೆ ಸಚಿವ ಮಹದೇವಪ್ರಸಾದ್‌ ಹೃದಯಾಘಾತದಿಂದ ಸಾವು ಎಚ್.ಎಸ್‌. ಮಹದೇವಪ್ರಸಾದ್‌ ನಡೆದುಬಂದ ಹಾದಿ == ಆಧಾರ == 1." - ". . . 27, 2007. 2007-06-04. 2. . " ". , 2002-05-31. 2002, . 2007-06-04. 3." ". . . 2007-06-04. 4 [೧] ://..//2013/05/19/------074144. == ಉಲ್ಲೇಖ == 2021-03-03 ವೇಬ್ಯಾಕ್ ಮೆಷಿನ್ ನಲ್ಲಿ.